ಮುದ್ದು ಮೋಹನ ನಿನ್ನ
                                                        ಎತ್ತಿ ಮುದ್ದಾಡುವೆನು
                                                    ನಿನ್ನೀ ಮುಗ್ಧ ನಗುವಿನಲಿ 
                                                    ನನ್ನ ನಾ ಮರೆಯುವೆನು. 
                                                   
ನಿನ್ನ ಆ ತೊದಲು ನುಡಿ 
 ಗಾಂಧರ್ವ ಶ್ಲೋಕದಂತೆನಗೆ 
ಆ ನಿನ್ನ ಕಂಗಳಲೆ ದೇವ ದೇವತೆಯರು..
ನಿನ್ನ ಪಾಲನೆಯೇ ದೈವ ಪೂಜೆಯು ಎನಗೆ
ನಿನ್ನಾಟ ಪಾಟಗಳೆ ಸರ್ವ ರಂಜನೆಯು.

                                     ಮುದ್ದು ಮೋಹನ ಮುರಳಿ 
                                     ಆಡು ಬಾ ಮಡಿಲೊಳು
                                     ಎತ್ತಿ ಮುದ್ದಾಡುವೆನು
                                  ಮನದಣಿಯೇ ರಮಿಸುವೆನು.




                                             

3 comments:

ಸೃಜನ್ ಮುದ್ದು ಪುಟ್ಟನ ಈ ಚಿತ್ರ ವಾವ್...ಕ್ಯೂಟ್ ಕ್ಯೂಟ್,,,,ಚೇತು ನಿನ್ನ ಕವನದಲ್ಲಿ ಮಮತೆ ತುಂಬಿ ಹರಿಯುತಿದೆ...ಏನಿದು ನೆನಪು ಈಗ....?? ಯಾಕೋ ನನಗೆ ಸ್ವಲ್ಪ ಅನುಮಾನ!!!,,,ಹಹಹಹ, ಶುಭವಾಗಲಿ.

ಹ್ಹ ಹ್ಹ ಹ್ಹ ಬಯ್ಯಾ ಏನೂ ಅನುಮಾನ ಬೇಡ..:) ನೀವು ಹೇಳಿದಂತೆ ಮಕ್ಕಳು ದೊಡ್ಡವರಾಗುತ್ತಿದ್ದಂತೆ ಅವರ ಬಾಲ್ಯದ ನೆನಪುಗಳು ಮುದ ನೀಡುತ್ತವೆ. ಅವ್ರ ಆ ಮುದ್ದು ಆಟಪಾಟಗಳನ್ನ ಮಿಸ್ ಮಾಡ್ಕೊಳೋಕೆ ಶುರು ಮಾಡ್ತೇವೆ ನಾವು ಅಲ್ವ..ಪ್ರತಿಕ್ರಿಯಿಸಿ ಪ್ರೋತ್ಸಾಹಿಸುತ್ತಿರುವುದಕ್ಕೆ ತುಂಬಾ ಧನ್ಯವಾದಳು ಬಯ್ಯ..:)

ಚೆಂದದ ಕವನ... ಮಗುವಿನಲ್ಲೇ ತಾಯಿ ತನ್ನದೇ ಹೊಸ ಲೋಕವನ್ನು ಕಂಡುಕೊಳ್ಳುತ್ತಾಳೆ ಎಂಬುದು ಈ ಸಾಲುಗಳಲ್ಲಿ ಚೆನ್ನಾಗಿ ಪ್ರತಿಬಿಂಬಿತವಾಗಿವೆ.

Post a Comment